About-Founder
ಸಂಸ್ಥಾಪಕರ ಬಗ್ಗೆ

ಹೋಮ್ | ನಮ್ಮ ಬಗ್ಗೆ |ಸ್ಥಾಪಕರ ಬಗ್ಗೆ

ಶ್ರೀ ವೀರಭದ್ರಪ್ಪ ಎಂ. ಚಿಗಟೇರಿಯವರು

gggggggg copy

ಲಿಂಗೈಕ್ಯ ಶ್ರೀ ವೀರಭದ್ರಪ್ಪ ಎಂ. ಚಿಗಟೇರಿಯವರು ನವೆಂಬರ್ 14, 1916 ರಂದು (ಮಕ್ಕಳ ದಿನಾಚರಣೆ) ಜನಿಸಿದರು, ಅವರು ಪ್ರಖ್ಯಾತ ಕೈಗಾರಿಕೋದ್ಯಮಿಗಳು ಹಾಗೂ ಶ್ರೀ ಜಗದ್ಗುರು ಜಯವಿಭವ ವಿದ್ಯಾಸಂಸ್ಥೆಯ (SJJES) ರೂವಾರಿಗಳು ಹೌದು.

ಅವರು ತಮ್ಮ ತಂದೆ ಪ್ರಖ್ಯಾತ ಮಾನವತಾವಾದಿ ಹಾಗೂ ಪರೋಪಕಾರಿಯಾಗಿದ್ದ, ಶ್ರೀ ಮುರಿಗೆಪ್ಪ ಚಿಗಟೇರಿಯವರಿಂದ ಪ್ರೇರಿತರಾಗಿ ಶಿಕ್ಷಣದ ಮೂಲಕ ಸಮಾಜವನ್ನು ಉನ್ನತೀಕರಿಸಲು ಬದ್ಧರಾಗಿದ್ದರು.

ಅವರ ತಂದೆ ಶ್ರೀ ಮುರಿಗೆಪ್ಪನವರು ಅಂದಿನ ದಿನಗಳಲ್ಲಿ ಚಿಗಟೇರಿ ಜನರಲ್ ಆಸ್ಪತ್ರೆ ಮತ್ತು ಜವಳಿ ಉದ್ಯಮ ಸ್ಥಾಪಿಸುವ ಮೂಲಕ "ಆರೋಗ್ಯ ಹಾಗೂ ಉದ್ಯೋಗಾವಕಾಶ”ಗಳನ್ನು ಸೃಷ್ಟಿಸಿ ದಾವಣಗೆರೆ ಜನತೆಗೆ ಗಣನೀಯ ಕೊಡುಗೆ ನೀಡಿರುತ್ತಾರೆ. ಇವರ ಹಾದಿಯಲ್ಲೇ ಮುಂದುವರಿದು, ಶ್ರೀ ವೀರಭದ್ರಪ್ಪನವರು “ಶಿಕ್ಷಣವನ್ನು” ಸಮಾಜಸೇವೆಯ ಸಾಧನವಾಗಿ ಆರಿಸಿಕೊಂಡಿದ್ದು ನಮಗೆಲ್ಲರಿಗೂ ಸ್ಫೂರ್ತಿದಾಯಕವಾಗಿದೆ.

ಇದಕ್ಕೆ ಸಾಕ್ಷಿಭೂತವಾಗಿ ಶ್ರೀ ವೀರಭದ್ರಪ್ಪ ಎಂ. ಚಿಗಟೇರಿಯವರು ಸ್ಪಷ್ಟ ಉದ್ದೇಶದೊಂದಿಗೆ ಶ್ರೀ ಜಗದ್ಗುರು ಜಯವಿಭವ ವಿದ್ಯಾಸಂಸ್ಥೆಯನ್ನು ಸ್ಥಾಪಿಸಿದರು.

ಶಿಕ್ಷಣವು ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಗೆ ಪ್ರಮುಖ ಸಾಧನ ಎಂಬುದನ್ನು ನಂಬಿದ್ದರು. ಆದಕಾರಣ ಮಕ್ಕಳ ಹಿನ್ನೆಲೆ ಅಥವಾ ಆರ್ಥಿಕ ಸ್ಥಿತಿಯನ್ನು ಲೆಕ್ಕಿಸದೆ ಎಲ್ಲರಿಗೂ ಶಿಕ್ಷಣ ನೀಡಲು ಬದ್ಧರಾಗಿದ್ದರು.

ಧರ್ಮ ಪ್ರಕಾಶ

ಶ್ರೀಮಜ್ಜಯ ಚಾಮರಾಜೇಂದ್ರ ಒಡೆಯರ್ ಬಹದ್ದೂರ್ ಮಹಾಸ್ವಾಮಿಯವರ ವರ್ಧಂತಿ ಮಹೋತ್ಸವದ ಸಂದರ್ಭದಲ್ಲಿ, ದಾವಣಗೆರೆಯ ಶ್ರೀ ಮುರಿಗೆಪ್ಪ ಚಿಗಟೇರಿ ಅವರ ಸೇವೆಯನ್ನು ಗುರುತಿಸಿ ‘ಧರ್ಮ ಪ್ರಕಾಶ’ ಎಂಬ ಬಿರುದನ್ನು ತಕ್ಕ ಮರ್ಯಾದೆಗಳೊಡನೆ ನೀಡಿ ಗೌರವಿಸಿದರು